ಈ ಭೂಮಿ ಯಾರದ್ದು ? ಇದು ಯಾರ ಆಸ್ತಿ ? ಇದರ ಒಡೆಯರು ಯಾರು ? ಯಾರದೋ ಭೂಮಿಗೆ ನಾವೇಕೆ ಇಷ್ಟೊಂದು ಹೊಡೆದಾಡುತ್ತೇವೆ?
ಈ ಪ್ರಶ್ನೆಯನ್ನು ಕೆದಕುತ್ತಾ ಹೋದರೆ ಕೆಲವು ವಿಚಾರಗಳು ಹೊರ ಬರುತ್ತವೆ.
ಸಾಮಾನ್ಯ ಮನುಷ್ಯನಿಂದ ಹಿಡಿದು, ನಾವು -ನೀವು, ಬಹುತೇಕ ಎಲ್ಲರೂ ಮಾಡುತ್ತಿರುವುದು ಅದನ್ನೇ ಅಲ್ಲವೇ ?
ಒಮ್ಮೆ ಯೋಚಿಸಿ ನೋಡಿ. ಈ ಭೂಮಿಯ ನಿಜವಾದ ಮಾಲೀಕ ಯಾರು ?
ಉತ್ತರ ಸ್ಪಷ್ಟ : ಪ್ರಕೃತಿ (ಭೂತಾಯಿ)
ಪ್ರಕೃತಿಯ ಒಡೆತನದ ಆಸ್ತಿಯನ್ನು ನಮ್ಮದು ಎನ್ನಲೂ ಯಾವ ಅಧಿಕಾರ ಇದೆ ನಮಗೆ,
ನಮ್ಮ ಹಿಂದಿನ ಪೀಳಿಗೆಯವರು ಅಜ್ಜ-ಮುತ್ತಜ್ಜರಿಗೆ ಯಾವ ಮೂಲದಿಂದ ಈ ಆಸ್ತಿ ಸಿಕ್ಕಿತು?
ಒಬ್ಬ ಒಂದು ಜಮೀನು ಕೊಳ್ಳಬೇಕೆಂದರೆ ಇಂತಿಷ್ಟು ಹಣ ನೀಡಿಯೋ ಅಥವಾ ಇನ್ಯಾವುದೋ ಪ್ರತಿಫಲ ನೀಡಿ ಜಮೀನನ್ನು ತನ್ನ ಸ್ವಾಧೀನಕ್ಕೆ ಮಾಡಿಕೊಳ್ಳುತ್ತಾನೆ. (ರಿಜಿಸ್ಟರ್ ಮಾಡಿಸಿಕೊಳ್ಳುತ್ತಾನೆ) ಹಿಂದಿನವರಾಗಲೀ, ಇವತ್ತಿನವರಾಗಲೀ ಯಾರು ಪ್ರಕೃತಿಯಿಂದ ಕ್ರಯಕ್ಕೆ ಪಡೆದಿದ್ದಾರೆ. ದಾಖಲೆಗಳಿವೆಯೇ ?
ನಮ್ಮ ಭಾರತದ ಸಂವಿಧಾನ ಅಥವಾ ಪ್ರಪಂಚದ ಯಾವುದೇ ದೇಶದ ಸಂವಿಧಾನದಲ್ಲಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಬೇಕಾದರೆ ಕ್ರಯದ ರೂಪದಲ್ಲಿ, ವ್ಯವಹಾರಿಕವಾಗಿ, ದಾನದ ರೂಪದಲ್ಲಿ ಜಮೀನು ಪಡೆಯುವುದು ಎಲ್ಲಾ ಸಂವಿಧಾನಗಳಲ್ಲೂ ಹೇಳಿರುವುದು ಇದೇ ತಾನೇ? (ಒಂದೊಂದು ದೇಶದಲ್ಲಿ ಒಂದೊಂದು ಕಾನೂನು ಇರಬಹುದು) ಅಂದ ಮೇಲೆ ಪ್ರಕೃತಿಯ ಆಸ್ತಿಯನ್ನು ಮಾನವರಾದ ನಾವುಗಳು ಇದು ನನ್ನ ಆಸ್ತಿ ಅಂತ ಹೇಳುವ ಅಧಿಕಾರ ಹೇಗೆ ಬರುತ್ತದೆ ? ಪ್ರಕೃತಿಯ ಬಳಿ ಯಾರು ಕ್ರಯ ಮಾಡಿದ್ದರು ಅದಕ್ಕೆ ಇರುವ ದಾಖಲೆಗಳೇನು ?
ಸಣ್ಣ ಮನೆ, ದೊಡ್ಡ ನೆ, ಬಂಗಲೆ ಹೀಗೇ ಎಲ್ಲಾ ರೀತಿಯ ಮನೆಗಳನ್ನು ಮನುಷ್ಯ ಕಟ್ಟಿರಬಹುದು. ಅದು ಅವನ ದುಡಿಮೆಯ ಪ್ರತಿಫಲ. ಆದರೆ ಮನೆ ಕಟ್ಟಿಸಿದ ಭೂಮಿಯ ಒಡೆಯರು ಯಾರು ? ಅವರಿಂದ ಅನುಮತಿ ಪಡೆದಿದ್ದೇವೆಯೇ ?
ಇದಕ್ಕೆ ಉತ್ತರ ಸಿಗಬಹುದೇ ?
ಇಲ್ಲ ವಾದರೆ ಈ ಭೂಮಿಯ ಒಂದು ಇಂಚು ಭೂಮಿಯನ್ನು ತಮ್ಮದು ಎಂದು ಹೇಳುವ ಯಾವುದೇ ಅಧಿಕಾರ ನಮಗಿಲ್ಲ.
ಯಾವ ಮಾನವರಿಗೂ ಇಲ್ಲ.
ಪ್ರಕೃತಿಯ ಭೂಮಿಯನ್ನು ಮಾನವರು ನಮ್ಮದೆಂದು ಹೇಳುತ್ತಿರುವ
ಈ ವಿಚಾರ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶಗಳಿವೆಯೇ ?
ರಾಜುವಿನಯ್ ದಾವಣಗೆರೆ
No comments:
Post a Comment